“ಮಾತು” ನಮ್ಮ ಪ್ರೀತಿಯ ಕಂದ..
——————
ನಮ್ಮ ಪ್ರೀತಿಯ ಮಗು,ಎಲ್ಲರಂತೆಯೇ
ಮುದ್ದು ಮುದ್ದಾದ,ಮುದ್ದು ಮಗು.
ಕವುಚಿ,ಅಂಬೆಗಾಲಿಕ್ಕಿ,ಹಿಂದೆ ಹಿಂದೆ ಸರಿದು,ಕುಳಿತು
ತ್ತ..ತ್ತಾ..ಅ..ಆ..ಅಮ್ಮಾ ಅಪ್ಪಾ ಎನ್ನುತ್ತಾ ಎದ್ದು
ಪುಟು ಪುಟು..ಹೆಜ್ಜೆ ಹಾಕುತ್ತ ನಡೆದಾಗ,
ಸಂತಸಪಟ್ಟು,ಪೊಟೊ ತೆಗೆದು ಸಂಭ್ರಮಿಸಿದ್ದೇನೆ.
ಆಟ ಪಾಟ,ಶಾಲೆ ಮುಗಿಸಿ,
ಎಲ್ಲ ಬೇಕುಗಳ ಆಸೆಪಟ್ಟು,
ಹಟಹಿಡಿದು,ಅತ್ತು..ಪಡೆದು
ಸಂತಸಪಟ್ಟು ..ಪಟ್ಟು,ಸುಸ್ತಾಗಿದೆ ಈಗ.
ಮಾತೆಂಬ,
ನನ್ನ ಮತ್ತಿನ ಮಗುವೇ,
ಮಲಗಮ್ಮ ಮಲಗು…
ಮಲಗಪ್ಪ ಮಲಗು..
ರಾತ್ರಿಯಾಯಿತು ಕಂದ..
ಸಾಕು ಇಂದಿಗೆ,
ಎದ್ದರೆ ನಾಳೆ ಮತ್ತೆ ಶುರುಹಚ್ಚು…
ಮಲಗು,
ಮಾತೇ..ನನ್ನ ಮುದ್ದಿನ ಮಗುವೇ..
ಮನೆಯ ಮಾಳಿಗೆಯಲ್ಲಿ ಸದ್ದಡಗಿಹೊಗಲಿ…
ಜಾರಿಕೊ..ಕನಸಿನ ಲೊಕಕ್ಕೆ ಕಂದಾ…
ಸಾಕಿಂದಿಗೆ ಸಾಕು..
ರಾತ್ರಿಯಾಯಿತು ಕಂದಾ..
————————-
http://sharadabooks.blogspot.com
Filed under: Uncategorized