ನಾಟಕ….ಎಲ್ಲ ನಾಟಕ

ಏನು ವಿಚಿತ್ರ!
ನಾಟಕದಲ್ಲಿ
ಪರಿಣಿತರು ನಾವೆಲ್ಲ.
ಬಾಲ್ಯದಿಂದಲೇ,
ಅಪ್ಪ ,ಅಮ್ಮನಲ್ಲಿ ,
ಅಣ್ಣ,ತಮ್ಮ,
ಅಕ್ಕ,ತಂಗಿಯರಲ್ಲಿ,
ಎಲ್ಲಕಡೆಯಲ್ಲಿ,ಎಲ್ಲೆಂದರಲ್ಲಿ,ಸುತ್ತುಮುತ್ತಲ್ಲಿ,

ನಾವೆಲ್ಲ ಪಾತ್ರ ದಾರಿಗಳು,
ಸೂತ್ರ ಹಿಡಿದವನು ಮೇಲೊಬ್ಬ
ಅಂತ ಹೇಳುದನ್ನ ಕೇಳುತ್ತ………
ಇದ್ದರೂ
ನೆನಪಿರಲ್ಲ ನಮಗೆ ನಮ್ಮ ಬಗ್ಗೆ.

ನಾಟಕದೊಳಗೆ ನಾಟಕ ಮಾಡುವುದರಲ್ಲಿ,
ನಮ್ಮನ್ನು ಮಿರಿಸುವರು ಯಾರು ಹೇಳಿ?
ಒಮ್ಮೊಮ್ಮೆ
ಅಸ್ಟು ತಲ್ಲೀನತೆ ನಮಗೆ.
ನಾಟಕದೊಳಗಿನ ನಾಟಕದಲ್ಲಿ,ಪಾತ್ರ ಬದಲಾಯಿಸೋದರಲ್ಲಿ
ನಾವಂತೂ ನಿಸ್ಸೀಮರು.

ಆಗ -ಗೊತ್ತಿದ್ದರೂ
ಆಡುತ್ತೇವೆ ಆಟ,ಆಟದೊಳಗಿನ ಆಟ.
ಯಾಕೆ ಬೇಕು ಹೇಳಿ,
ಈ ರೀತಿ….. ನೀತಿ ?
ಗೊತ್ತಿದ್ದೂ ಗೊತ್ತಿದ್ದೂ,
ಒಳಗೊಂದು,ಹೊರಗೊಂದು !
ಇಲ್ಲ ,ಬಿಡಲ್ಲ
ನಾಟಕ …ನಾಟಕ…
ಯಾಕೆಂದರೆ
ನಾಟಕದಲ್ಲಿ ಪರಿಣಿತರು……..ಬಾಲ್ಯದಿಂದಲೇ

ಸತ್ಯ

ಸತ್ಯ, ಶಾಂತಿ, ತ್ಯಾಗ,ನ್ಯಾಯ,
ಪರೋಪಕಾರ, ದಯೆ, ಕರುಣೆ,
ದಾನ, ದರ್ಮ, ಪ್ರೀತಿ,ಪ್ರೇಮ,
ಬೇಕಾಗಿದ್ದು ಸಾಮಾಜಕ ಜೀವನ ನೆಮ್ಮದಿಯಿಂದ
ವ್ಯವಸ್ಥಿತವಾಗಿ ನಡೆಯೋದಕ್ಕೆ.
ಮಾತ್ರ.
ಮನಸನು ಮುದುಡಿಸಿ,ಸೃಜನ ಶೀಲತೆಯ ಹೊಸಕಿ
ಕಣ್ಣಿಗೆ ಪಟ್ಟಿ ಕಟ್ಟಿ ದುಡಿಸೋಕಲ್ಲ.
ಮುಗ್ದರ ಸವಾರೀ ಮಾಡೋಕಲ್ಲ

ಚಿಕ್ಕ ಮೀನನು ,ದೊಡ್ಡ ಮೀನು ನುಂಗುವ
ಈ ಜಗತ್ತಲ್ಲಿ
ಇಂದು ಕಾಣುತ್ತಿರೋದು
ಈ ಎಲ್ಲದರ ಹೆಸರಲ್ಲಿ
ನಡೆಯೋ ಶೋಷಣೆ

ಅರೆ! ಬಿಚ್ಚಿಬಿಡಿ
ಮನಸ್ಸು ಹೊರಡಲಿ,ಹಾರಾಡಲಿ,
ಕಲಾ ಕಲ್ಪನೆಯ ಕುದುರೆಯನ್ನೇರಿ .
ವಿಹರಿಸಲಿ ಮುಕ್ತ ಬಾನಂಗಳದಲಿ .

ಚಿಂತೆ!

ಚಿಂತೆಯಾದರೆ ನಿಮಗೆ,
ಮತ್ತೆ ಸಿಲುಕುವಿರಿ
ಒಳಗೊಂದು,ಹೊರಗೊಂದು,ನಟನಾಚತುರ ವಿಶಾರದರ,
“ಗಾಳವಿಕ್ಕುವ,ಲೋಕಕ್ಕೆ ಉಚಿತ ಬುದ್ದಿ ಹೇಳುವ”
ಅತಿ ಬುದ್ದಿವಂತರ ಚತುರ ಚಾದರದೊಳಗೆ .
ಮೆಟ್ಟಿ ಮುರಿದಿಕ್ಕಿ ಬಾವನೆಗಳ
ಅತಿಯನ್ನ
ಅತಿಯಾದರೆ ಅಮೃತವೂ ವಿಷ.

ಯಾಕೆ ಹೀಗಾಯಿತು

ನೀವು ನನ್ನ ಯಾಕೆ ಈ ಊರಿಗೆ
ಕಲಿಸಿದ್ದಿರೋ ನನಗಂತು ಗೊತ್ತಿಲ್ಲ
ನನ್ನಲ್ಲಿ ನೀವು ಹೇಳಲೂ ಮರೆತಿರೆನು?

ನಾನು ಅಂದು ಕೊಂಡಂತೆ ಇಲ್ಲಿ ಇಲ್ಲವಲ್ಲ .
ನನ್ನ ಮನಸಿಗೆ ಇಲ್ಲಿ ಒಂದು ಕ್ಷಣವು ಬಿಡುವಿಲ್ಲ.
ರಾತ್ರಿ ಹಗಲೆನ್ನದೆ
ದುಡಿಮೆ ಅದಕ್ಕೆ .
(ಅಂದುಕೊಂದದ್ದೇ ತಪ್ಪು ಯೇನ್ಥಿರೆನೋ)

ನಿಮಗೆ ಬಹುಶ ಆಟವೇನೋ ,ನನಗೋ ಪ್ರಾಣಸಂಕಟ ,ಒದ್ದಾಟ ,ಹೊರಳಾಟ .
ಅಗಲಿ ಅಗಲಿ ,ಪ್ರಾಣವೇ ಹೋಗಲಿ .
ಆಗಿನ ಬಿದುವಿನಲ್ಲೇ ಮತ್ತೆ ಬರಲೇನಿಮ್ಮಬಳಿಗೆ?
ಮತ್ತೆ ಕಲಿಸದಿರಿ ನನ್ನ ಈ ಬಲೆಯ ಒಲೆಯ ಒಳಗೆ
ನೆಮ್ಮದಿಯ ಉಸಿರು ಬಿಡಲು

ಇರಲಿ ನಿಮ್ಮದೇ ಮಡಿಲು …

ಗೆಳೆತನ

ಗೆಳೆತನಕ್ಕೆ ಇಥಿಮಿಥಿಗಳಿವೆಯೇ?
ಯಾವದನ್ನು ನೀವು ಗೆಳೆತನ ಎನ್ನುತ್ತಿರಿ ? ವಿಚಿತ್ರ ಎನಿಸುತ್ತೆ ಅಲ್ಲ !
ಮಾನವ ಸಂಗ ಜೀವಿ ಎಲ್ಲ ನಿಜ ಆದರೆ ಎಲ್ಲ ಕಾಲಕ್ಕೂ ಒಂದೇ ಸಂಗ ಅಲ್ಲ
ಅದೇ ಅಚ್ಚರಿ !
ಜೀವನದ ಅರ್ದಕ್ಕು ಹೆಚ್ಚಿನ ದಾರಿ ಕ್ರಮಿಸಿದವರಿಗಂತು ಅರ್ಥವಾದಿತು.
ಪರಸ್ಪರ ಕೊದುಕೊಳ್ಳುವಿಕೆಯಲ್ಲಿಯೇ ಗೆಳೆತನದ ಪಂಚಾಗ. ಕಟ್ಟಡ ಎಲ್ಲ!
ಸಂಬಂದಕ್ಕೆ ,ಸಂಪರ್ಕವೇ ಸಾದನ.
ಸಂಪರ್ಕಕ್ಕೆ ಅವಶ್ಯಕತೆಯೇ ಅದಾರ.
ಅಗತ್ಯ ಇದ್ದಾಗ ,ಆಹಾ ಅದೇನು ಒಡನಾಟ,
ಒಡಲಿಂದ ಹುಟ್ಟಿ ಬರುವ ಪ್ರೀತಿ ,ಕಾಳಜಿ.
ಅನುಭವಿಸಿದರಿಗೆ ಗೊತ್ತು.
ಹ೦, ನಿಮಗೂ ಗೊತ್ತು ತಾನೆ?

ಸಮಯದ ಸರಿದಾರಿಯಲ್ಲಿ
ಸೇರಿಹೋಗುವ ಜನಗಳು ಅದೆಸ್ಟೋ!
ಜನಬದಲಾದರು…..ರೂ,
ಬಾವ ಒಂದೇ.

ಇಷ್ಟೆ… ಅದರೂ,ಅದೇ ತೀವ್ರತೆ ಇರುತ್ತಲ್ಲ!

ಇರಬೇಕು. ಯಾಕೆಂದರೆ ಮಾನವ ಸಂಗಜೀವಿ.

ಆಸೆ / ಆಕಾಂಕ್ಷೆ .

ಆಸೆ / ಆಕಾಂಕ್ಷೆ .
ಆಸೆ,ಆಕಾಂಕ್ಷೆಗಳು ಮಾನವನಿಗೆ” ಸಹಜ .”
ಅಂದ್ರೆ ಹುಟ್ಟಿನಿಂದಲೇ ಬಂದದ್ದು .
ಹವ್ದುಥಾನೆ?
ಯಾರು ಇವುಗಳನ್ನು ಬೆಳೆಸಿದ್ದು ?
ಅಪ್ಪ, ಅಮ್ಮ ,ಅವರು, ಇವರು ,ಎಲ್ಲರೂ .
ಕಿದಿಯಾಗಿದ್ದ ಬೆಂಕಿಗೆ ಎಲ್ಲರೂ ತಿದಿ ಒತ್ತಿದವರೇ!

ಆಸೆಯೇ ದುಕ್ಕಕ್ಕೆ ಮೂಲ
ಅಂದವನ ಮಾತು ಕೇಳಿ ,
ಈಗ ಮತ್ತೆ ಇವರೆಲ್ಲ
ಆಸೆ ಒಳ್ಳೇದಲ್ಲ ,ಅತಿಯಾಸೆ ಕಂಡಿತಒಳ್ಳೇದಲ್ಲ ಅಂತ
ಎಲ್ಲ ತಲೆ ತಿನ್ತಾರೆ .

ಅಂದ ಬುದ್ದನಿಗೆ ನಿಜವಾದದ್ದು
ಉಳಿದ ಎಲ್ಲರಿಗೆ ಹೇಗೆ ನಿಜವಗಬೇಕು?

“ತಾನು ಸಾಯಬೇಕು ಸ್ವರ್ಗ ಪಡೆಯಬೇಕು “
ಗೊತ್ತಿದ್ದವರೂ ಕೊಲೆ ಮಾಡ್ತಾರಲ್ಲ?

ಹಿಂಸೆ ಪಾಪ ಅಲ್ವಾ?…………..

ಹಸಿವು

ಹಸಿವು
ಯೋಚಿಸಿದರೆ ಒಂದು ವಿಚಿತ್ರ ಸಂಗತಿ
ಹಸಿವಿಲ್ಲ ದಿದ್ದರೆ ನಮ್ಮ ಬದುಕು ಅರ್ಥ ಶೂನ್ಯ ಅಂಥ
ನಿಮಗೆ ಎಂದಾದರೂ ಅನಿಸಿದೆಯ ?
ಹಸಿವಿನಿಂದಗಿಯೇ ಜಗತ್ತು ಓದುತ್ತುದೆ.
ಅಲ್ಲವೇ?
ಎಲ್ಲ ಚಟುವಟಿಕೆಗಳು ಹಸಿವಿನ ಸುತ್ತ -ಮುತ್ತ
ರಾಜಕೀಯದಿಂದ ವೆದಂಥದವರೆಗೆ
ಸಂಪಾದನೆಯಿಂದ ಸಮಸ್ಯೆಗಳವರೆಗೆ
ಒಂದೇ ಸೂತ್ರ
ಹಸಿವು
ಅದಕ್ಕಾಗಿಯೇ ಬಾಲ್ಯದಿಂದ ಮುಪ್ಪಿನ ವರೆಗೆ
ಎಲ್ಲ ಚಟುವಟಿಕೆಗಳು .
ಪರಿಣಾಮ
ಎಲ್ಲ ಹೆಣಗಾಟ ಗೊಣಗಾಟ ದೊಂಬರಾಟ
——-

ಯಾಕೆ ಯೋಸಿಸ್ಥಇದ್ದಿರ
ಇದುವೇ ಜೀವನ
ಬದುಕು ಹೀಗೆಲ್ಲ ಯಾಕೆ  ಅಂತ
ನೋಡಿದಾಗ ಅನಿಸಿದ್ದ
ಬೇರೆ ಕಾರಣ ಗಳಿದ್ದರೆ ?
ಇರಬಹುದೇನೋ ………….

ಮನಸಿಗೆ ಅನಿಸಿದ್ದು–ಬರೆಹಕ್ಕೆ ಬಂದದ್ದು

ಕೆಲವೊಮ್ಮೆ ಅನಿಸುತ್ತದೆ ಯಾಕೆ ಬರೆಯುವದು ಅಂತ.
ಆದರೆ ಒಂದೊಂದು ಸಮಯದಲ್ಲಿ ಒಂದೊಂದು ಹುಚ್ಚು .
ಹಾಗೆಂದೇ ಇಟ್ಟುಕೊಳ್ಳಿ .
ಇತ್ತಿಚೆಗೆ ನಾನು ಯಾಕೆ ಬ್ಲಾಗ್ ಬರಿ ಬಾರದು?
ಅಂತ ತುಂಬ ಅನಿಸ್ತ ಇತ್ತು .
ಕನ್ನಡದಲ್ಲಿ ಬರೆಯುವುದು ಹೇಗೆ ಅಂತ ಗೊತ್ತಿಲ್ಲ .
ಇಂಗ್ಲಿಷ್ ಅಂತು ಬರೆದರೆ ಬರೆದವನಿಗೆ ಅರ್ಥ ಆಗಲಿಕ್ಕಿಲ್ಲ ಅನ್ನೋದು ಗಾರಂಟಿ.
ಹಾಗಾಗಿ ಕನ್ನಡದಲ್ಲಿ ಬರೆಯುದನ್ನು ಕಲಿಯೋದೇ ಒಂದು ಸಮಸ್ಯೆ ಯಾಗಿತ್ತು .
ಅಂತು ಇವತ್ತು ಇಷ್ಟನ್ನು ಬರಯೂವಸ್ಟು ಸಾದ್ಯ ಆಯಿತಲ್ಲ ಅಂತ ಕುಶಿಯೋ ಕುಶಿ .

ಇನ್ನು ಸರಿಯಾಗಿ ಬರ್ತಾ ಇಲ್ಲ.
ಅದರೂ ದಿನದಿಂದ ದಿನಕ್ಕೆ ಸುದಾರಿಸಿಕೊಂಡು ಹೋಗಬಲ್ಲೆ ಅಂತ ಇವತ್ತು
ವಿಸ್ವಾಸ ಬಂದಿದೆ .
ಅದಕ್ಕಾಗಿ ಈ ಬರೆಹ .
ಯಾರು ಓದ್ತ್ಹರೋ ಗೊತ್ತಿಲ್ಲ
ನನ್ನ ಹುಚ್ಚಿಗೆ ಒಂದು ವ್ಯವಸ್ಥೆ ಆದ ಸಮಾದಾನ ನನಗೆ .
ಮನುಷ್ಯ ನಿಗೆ ಅಸ್ಟೇ ತಾನೆ ಬೇಕಾದ್ದು !

ಮನಸಿಗೆ ತೋಚಿದ್ದು ಬರೆಹದಲ್ಲಿ ಬಂದದ್ದು
ಬರಲಿ ಬರಲಿ …………..

Follow

Get every new post delivered to your Inbox.